Select Page

ದಿನಾಂಕ: 02 ಅಕ್ಟೋಬರ್ 2026 ರಂದು ಬೆಳಿಗ್ಗೆ 9:30 ಗಂಟೆಗೆ, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇವರ ಸಹಯೋಗದಲ್ಲಿ "ನವಜೀವನ ಲೇ ಕೌನ್ಸಿಲರ್ ಸಮ್ಮಿಲನ ಹಾಗೂ LPC - 10ನೇ ಬ್ಯಾಚ್ ಉದ್ಘಾಟನಾ ಸಮಾರಂಭ" ವನ್ನು ಕಮಲ್ ಎ ಬಾಳಿಗ ಹಾಲ್, 3ನೇ ಮಹಡಿಯಲ್ಲಿ ಆಯೋಜಿಸಲಾಗಿತ್ತು.

ಡಾ. ಹೇಮಂತ್ ಕುಮಾರ್, ತಾಲೂಕು ವಿಮಾ ವೈದ್ಯಕೀಯ ಅಧಿಕಾರಿ, ಉಡುಪಿ ಹಾಗೂ ನೋಡಲ್ ಅಧಿಕಾರಿ ಇ.ಎಸ್.ಐ. ಆಸ್ಪತ್ರೆ, ಮಂಗಳೂರು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಶಿಕಲಾ ರಾಜವರ್ಮ ರೋಟರಿ ಮಣಿಪಾಲ ನಿವೃತ್ತ ಮುಖ್ಯ ಶಿಕ್ಷಕಿ ಮಾಧವ ಕೃಪ ಸ್ಕೂಲ್ ಮಣಿಪಾಲ ಇವರು ಆಗಮಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ದೀಪಾ ಕೊಠಾರಿ, ನಿರ್ದೇಶಕರು, ಆಳ್ವಾಸ್ ಸೆಂಟರ್ ಫಾರ್ ವೆಲ್‌ನೆಸ್ ಟ್ರೈನಿಂಗ್ ಹಾಗೂ ಸಹ ಪ್ರಾಧ್ಯಾಪಕಿ, ಮನೋವಿಜ್ಞಾನ ವಿಭಾಗ, ಆಳ್ವಾಸ್ ಕಾಲೇಜು, ಮೂಡುಬಿದಿರೆ ರವರು "MIND OVER MOBILE - ಮೊಬೈಲ್ ಮೇಲೆ ಮನಸ್ಸಿನ ಹಿಡಿತ" ಎಂಬ ವಿಷಯದ ಬಗ್ಗೆ ಅತ್ಯಂತ ಉಪಯುಕ್ತವಾದ ಉಪನ್ಯಾಸ ನೀಡಿದರು.

ಈ ಸಮಾರಂಭದಲ್ಲಿ ಡಾ. ವಿರೂಪಾಕ್ಷ ದೇವರಮನೆ, ಮನೋವೈದ್ಯರು, ಡಾ. ಮಾನಸ ಈ. ಆರ್, ಮನೋವೈದ್ಯರು, ಶ್ರೀಮತಿ ಅಮಿತಾ ಪೈ - ಸಂಸ್ಥಾಪಕರು, One Good Step, ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ವೈದ್ಯಕೀಯ ನಿರ್ದೇಶಕರು, ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಹಳೆಯ LPC ವಿದ್ಯಾರ್ಥಿಗಳ ಪುನರ್ ಚೇತನ ಕಾರ್ಯಕ್ರಮ ಹಾಗೂ 10ನೇ ಬ್ಯಾಚ್ ಶಿಕ್ಷಾರ್ಥಿಗಳಿಗೆ "ಕೌನ್ಸೆಲಿಂಗ್‌ನ ಮೂಲ ತತ್ವಗಳು" ಎಂಬ ವಿಷಯದ ಬಗ್ಗೆ ಶ್ರೀಮತಿ ಸೌಜನ್ಯ ಶೆಟ್ಟಿ ರವರಿಂದ ಉಪನ್ಯಾಸ ನಡೆಯಿತು.

ಕಾರ್ಯಕ್ರಮವು ಶ್ರೀಮತಿ ಪೂರ್ಣಿಮಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಸೌಜನ್ಯ ಶೆಟ್ಟಿ, ಕಾರ್ಯಕ್ರಮ ಸಂಯೋಜಕರು ಮತ್ತು ಆಡಳಿತಾಧಿಕಾರಿ, ಡಾ. ಎ. ವಿ. ಬಾಳಿಗ ಆಸ್ಪತ್ರೆ, ಉಡುಪಿ ಇವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಪದ್ಮರಾಘವೇಂದ್ರ, ಆಪ್ತ ಸಮಾಲೋಚಕರು, ಡಾ. ಎ. ವಿ. ಬಾಳಿಗ ಆಸ್ಪತ್ರೆ ಇವರು ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ದೀಪಶ್ರೀ, ಆಪ್ತ ಸಮಾಲೋಚಕರು ರವರು ನಿರೂಪಿಸಿದರು. ನೂರಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.